Monday, 17 June 2019

🍓 ಸಿಂಧೂ (ಇಂಡಸ್ ನದಿ)



🍓 ಸಿಂಧೂ (ಇಂಡಸ್ ನದಿ)



# ನದಿಯ ಉಗಮ ಸ್ಥಾನ :— ಮಾನಸ ಸರೋವರ, ಟಿಬೆಟ್

# ಕೊನೆಗೆ ಸೇರುವ ಪ್ರದೇಶ (Drain Into) :— ಪಾಕಿಸ್ತಾನದ ಕರಾಚಿ ಬಳಿ ಅರಬ್ಬೀ ಸಮುದ್ರ

# ವ್ಯಾಪ್ತಿ ರಾಜ್ಯಗಳು :—  (ಪಾಕಿಸ್ತಾನ, ಭಾರತ) ಜಮ್ಮು ಕಾಶ್ಮೀರ, ಗುಜರಾತ್

# ಪ್ರಮುಖ ಅಣೆಕಟ್ಟುಗಳು :— ಮಂಗ್ಲಾ ಅಣೆಕಟ್ಟು (ಝೀಲಂ ನದಿ), ತರಬೇಲಾ ಅಣೆಕಟ್ಟು

🍓 ಸಿಂಧು ನದಿಯ ಉಪನದಿಗಳು

1.ಜೀಲಂ
2.ಚೀನಾಬ್
3.ರಾವಿ
4.ಬಿಯಾಸ್
5.ಸಟ್ಲೇಜ್

# ಇವು 5 ನದಿಗಳು ಪಂಜಾಬ್ ನಲ್ಲಿ ಹರೆಯುವುದರಿಂದ! - ಪಂಜಾಬ್ ನ್ನು ಪಂಚನದಿಗ ರಾಜ್ಯ! ಎಂದು ಕರೆಯುತ್ತಾರೆ.
(ಬಿಜಾಪುರ ನ್ನು ಪಂಚನದಿಗಳ ಜಿಲ್ಲೆ ಎನ್ನುವರು)

1.ಝೀಲಂ- ಕಾಶ್ಮೀರದ ವೆರಿನಾಗ್ ಎಂಬಲ್ಲಿ  ಉಗಮಿಸುತ್ತದೆ- ವುಲ್ಲಾರ್ ಸರೋವರವನ್ನು ಪ್ರವೇಸಿಸುತ್ತದೆ- ( ಭಾರತದ ಅತಿದೊಡ್ಡ ಸಿಹಿನೀರಿನ ಸರೋವರ)- ದಾಲ್ ಸರೋವರ ಈ ನದಿಯಿಂದ ನಿರ್ಮಾಣಗೊಂಡಿದೆ-

2.ಚೀನಾಬ್- ( ಚಂದ್ರಭಾಗ) ಹಿಮಾಲಯದ ಚಂದ್ರಭಾಗದಲ್ಲಿ ಉಗಮ- ಭಾರತ ಪಾಕ್ ವಿವಾದಿತ ಬಗ್ಲಿಹಾರ್ ಜಲವಿದ್ಯುತ್ ಯೋಜನೆ - ( ಇದನ್ನು ಸೆಲಾಲ್ & ದುಲ್ಹಾಸ್ತಿ ಎಂಬುವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ)

3.ರಾವಿ-   ರೋಟ್ಹಾಂಗ್ ಕಣಿವೆಯಲ್ಲಿನ ಕುಲು ಕಣಿವೆಯಲ್ಲಿ

4.ಬಿಯಾಸ್- ಬಿಯಾಸ್ ಕುಂಡ ಎಂಬಲ್ಲಿ ಉಗಮ- ಸಟ್ಲೆಜ್ ನದಿಗೆ ಸೇರುತ್ತದೆ

5.ಸಟ್ಲೆಜ್- ಚೀನಾದ  ರಾಕಾಸ್ ಸರೋವರ ಎಂಬಲ್ಲಿ ಉಗಮ -
♂♂ *ಭಾರತದ ಗಡಿಯಾಚೆಯಲ್ಲಿ ಉಗಮ ಹೊಂದುವ ಸಿಂಧೂ ನದಿಯ ಏಕೈಕ ಉಪನದಿ* ಹಿಮಾಚಲ ಪ್ರದೇಶದ ಶಿಪ್ಕ್ ಲಾ ಕಣಿವೆಯ ಮೂಲಕ ಭಾರತವನ್ನು ಸೇರುತ್ತದೆ. ಬಾಂಕ್ರಾ- ನಂಗಲ್ ವಿವಿಧೋದ್ದೇಶ ನದಿ ಕಣಿವೆ ಯೋಜನೆ ನಿರ್ಮಾಣ ಮಾಡಲಾಗಿದೆ. ಇದು ಪಂಜಾಬ್ ,ಹರಿಯಾಣ ,& ರಾಜಸ್ತಾನ ರಾಜ್ಯಗಳ ಜಂಟಿ ಯೋಜನೆಯಾಗಿದೆ.

🍓 ಸಿಂಧೂ ನದಿ ವಿವಾದ &  ಒಪ್ಪಂದ

# ಭಾರತ ಮತ್ತು ಪಾಕಿಸ್ತಾನ 1960ರ ಸೆಪ್ಟೆಂಬರ್‌ 19ರಂದು ಕರಾಚಿಯಲ್ಲಿ ಸಿಂಧೂ ನದಿ ಜಲ ಒಪ್ಪಂದಕ್ಕೆ ಸಹಿ ಹಾಕಿದವು.
* ಆದರೆ, ಈ ಒಪ್ಪಂದ  1960ರ ಏಪ್ರಿಲ್‌ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬಂತು.

# ಅಂದಿನ ಪ್ರಧಾನಿ-  ಜವಾಹರಲಾಲ್‌ ನೆಹರೂ ಮತ್ತು ಪಾಕಿಸ್ತಾನದ ಅಧ್ಯಕ್ಷ - ಅಯೂಬ್‌ಖಾನ್‌ ಅವರಿಂದ ಒಪ್ಪಂದಕ್ಕೆ ಸಹಿ

# ಒಪ್ಪಂದದ ಅನ್ವಯ ಪೂರ್ವದಲ್ಲಿ ಹರಿಯುವ  - ರಾವಿ,ಬಿಯಾಸ್, ಸಟ್ಲೇಜ್ ಭಾರತಕ್ಕೆ ಹಂಚಿಕೆ ಮಾಡಲಾಯಿತು.
* ಈ ನದಿಗಳು ಪಂಜಾಬ್‌ನಿಂದ ಹರಿಯುತ್ತವೆ.

# ಪಶ್ಚಿಮದಲ್ಲಿರುವ - ಸಿಂಧೂ, ಚೇನಬ್‌, ಜೇಲಂ ಪಾಕಿಸ್ತಾನಕ್ಕೆ ಎಂದು ನಿರ್ಧರಿಸಲಾಯಿತು.

🍓 ವಿಶೇಷತೆಗಳು :—

1.ಟಿಬೆಟ್ ನಲ್ಲಿ ಸಿಂಧೂ ನದಿಗೆ 'ಸಿಂಘೆ ಕಂಬಾಬ್' ಎಂದು ಕರೆಯುವರು.

2.ಸಿಂಧೂ ನದಿಗೆ ಪಾಕಿಸ್ತಾನದಲ್ಲಿ ಸೇರುವ ಉಪನದಿಗಳೆಂದರೆ 'ಜೋದಾಲ್, ಕಾಬೂಲ್, ತಾಚಿ' ಪ್ರಮುಖವಾದವುಗಳು.
===================

1 comment:

  1. First of all, thank you for letting me see this information. I think this article can give me a lot of inspiration. I would appreciate 工具 if you could post more good contents in the future.

    ReplyDelete