🍓 ಸಿಂಧೂ (ಇಂಡಸ್ ನದಿ)
# ನದಿಯ ಉಗಮ ಸ್ಥಾನ :— ಮಾನಸ ಸರೋವರ, ಟಿಬೆಟ್
# ಕೊನೆಗೆ ಸೇರುವ ಪ್ರದೇಶ (Drain Into) :— ಪಾಕಿಸ್ತಾನದ ಕರಾಚಿ ಬಳಿ ಅರಬ್ಬೀ ಸಮುದ್ರ
# ವ್ಯಾಪ್ತಿ ರಾಜ್ಯಗಳು :— (ಪಾಕಿಸ್ತಾನ, ಭಾರತ) ಜಮ್ಮು ಕಾಶ್ಮೀರ, ಗುಜರಾತ್
# ಪ್ರಮುಖ ಅಣೆಕಟ್ಟುಗಳು :— ಮಂಗ್ಲಾ ಅಣೆಕಟ್ಟು (ಝೀಲಂ ನದಿ), ತರಬೇಲಾ ಅಣೆಕಟ್ಟು
🍓 ಸಿಂಧು ನದಿಯ ಉಪನದಿಗಳು
1.ಜೀಲಂ
2.ಚೀನಾಬ್
3.ರಾವಿ
4.ಬಿಯಾಸ್
5.ಸಟ್ಲೇಜ್
# ಇವು 5 ನದಿಗಳು ಪಂಜಾಬ್ ನಲ್ಲಿ ಹರೆಯುವುದರಿಂದ! - ಪಂಜಾಬ್ ನ್ನು ಪಂಚನದಿಗ ರಾಜ್ಯ! ಎಂದು ಕರೆಯುತ್ತಾರೆ.
(ಬಿಜಾಪುರ ನ್ನು ಪಂಚನದಿಗಳ ಜಿಲ್ಲೆ ಎನ್ನುವರು)
1.ಝೀಲಂ- ಕಾಶ್ಮೀರದ ವೆರಿನಾಗ್ ಎಂಬಲ್ಲಿ ಉಗಮಿಸುತ್ತದೆ- ವುಲ್ಲಾರ್ ಸರೋವರವನ್ನು ಪ್ರವೇಸಿಸುತ್ತದೆ- ( ಭಾರತದ ಅತಿದೊಡ್ಡ ಸಿಹಿನೀರಿನ ಸರೋವರ)- ದಾಲ್ ಸರೋವರ ಈ ನದಿಯಿಂದ ನಿರ್ಮಾಣಗೊಂಡಿದೆ-
2.ಚೀನಾಬ್- ( ಚಂದ್ರಭಾಗ) ಹಿಮಾಲಯದ ಚಂದ್ರಭಾಗದಲ್ಲಿ ಉಗಮ- ಭಾರತ ಪಾಕ್ ವಿವಾದಿತ ಬಗ್ಲಿಹಾರ್ ಜಲವಿದ್ಯುತ್ ಯೋಜನೆ - ( ಇದನ್ನು ಸೆಲಾಲ್ & ದುಲ್ಹಾಸ್ತಿ ಎಂಬುವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ)
3.ರಾವಿ- ರೋಟ್ಹಾಂಗ್ ಕಣಿವೆಯಲ್ಲಿನ ಕುಲು ಕಣಿವೆಯಲ್ಲಿ
4.ಬಿಯಾಸ್- ಬಿಯಾಸ್ ಕುಂಡ ಎಂಬಲ್ಲಿ ಉಗಮ- ಸಟ್ಲೆಜ್ ನದಿಗೆ ಸೇರುತ್ತದೆ
5.ಸಟ್ಲೆಜ್- ಚೀನಾದ ರಾಕಾಸ್ ಸರೋವರ ಎಂಬಲ್ಲಿ ಉಗಮ -
♂♂ *ಭಾರತದ ಗಡಿಯಾಚೆಯಲ್ಲಿ ಉಗಮ ಹೊಂದುವ ಸಿಂಧೂ ನದಿಯ ಏಕೈಕ ಉಪನದಿ* ಹಿಮಾಚಲ ಪ್ರದೇಶದ ಶಿಪ್ಕ್ ಲಾ ಕಣಿವೆಯ ಮೂಲಕ ಭಾರತವನ್ನು ಸೇರುತ್ತದೆ. ಬಾಂಕ್ರಾ- ನಂಗಲ್ ವಿವಿಧೋದ್ದೇಶ ನದಿ ಕಣಿವೆ ಯೋಜನೆ ನಿರ್ಮಾಣ ಮಾಡಲಾಗಿದೆ. ಇದು ಪಂಜಾಬ್ ,ಹರಿಯಾಣ ,& ರಾಜಸ್ತಾನ ರಾಜ್ಯಗಳ ಜಂಟಿ ಯೋಜನೆಯಾಗಿದೆ.
🍓 ಸಿಂಧೂ ನದಿ ವಿವಾದ & ಒಪ್ಪಂದ
# ಭಾರತ ಮತ್ತು ಪಾಕಿಸ್ತಾನ 1960ರ ಸೆಪ್ಟೆಂಬರ್ 19ರಂದು ಕರಾಚಿಯಲ್ಲಿ ಸಿಂಧೂ ನದಿ ಜಲ ಒಪ್ಪಂದಕ್ಕೆ ಸಹಿ ಹಾಕಿದವು.
* ಆದರೆ, ಈ ಒಪ್ಪಂದ 1960ರ ಏಪ್ರಿಲ್ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬಂತು.
# ಅಂದಿನ ಪ್ರಧಾನಿ- ಜವಾಹರಲಾಲ್ ನೆಹರೂ ಮತ್ತು ಪಾಕಿಸ್ತಾನದ ಅಧ್ಯಕ್ಷ - ಅಯೂಬ್‌ಖಾನ್ ಅವರಿಂದ ಒಪ್ಪಂದಕ್ಕೆ ಸಹಿ
# ಒಪ್ಪಂದದ ಅನ್ವಯ ಪೂರ್ವದಲ್ಲಿ ಹರಿಯುವ - ರಾವಿ,ಬಿಯಾಸ್, ಸಟ್ಲೇಜ್ ಭಾರತಕ್ಕೆ ಹಂಚಿಕೆ ಮಾಡಲಾಯಿತು.
* ಈ ನದಿಗಳು ಪಂಜಾಬ್‌ನಿಂದ ಹರಿಯುತ್ತವೆ.
# ಪಶ್ಚಿಮದಲ್ಲಿರುವ - ಸಿಂಧೂ, ಚೇನಬ್, ಜೇಲಂ ಪಾಕಿಸ್ತಾನಕ್ಕೆ ಎಂದು ನಿರ್ಧರಿಸಲಾಯಿತು.
🍓 ವಿಶೇಷತೆಗಳು :—
1.ಟಿಬೆಟ್ ನಲ್ಲಿ ಸಿಂಧೂ ನದಿಗೆ 'ಸಿಂಘೆ ಕಂಬಾಬ್' ಎಂದು ಕರೆಯುವರು.
2.ಸಿಂಧೂ ನದಿಗೆ ಪಾಕಿಸ್ತಾನದಲ್ಲಿ ಸೇರುವ ಉಪನದಿಗಳೆಂದರೆ 'ಜೋದಾಲ್, ಕಾಬೂಲ್, ತಾಚಿ' ಪ್ರಮುಖವಾದವುಗಳು.
===================

































